24 ಗಂಟೆಗಳಲ್ಲಿ 2 ನೇ ಪ್ರಕರಣ: ಆಸೀಸ್ ವೇಗಿಯ ಬೌನ್ಸರ್ ಗೆ ಲಂಕಾದ ಮತ್ತೋರ್ವ ಬ್ಯಾಟ್ಸ್ ಮನ್ ಆಸ್ಪತ್ರೆ ಪಾಲು!

ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ ಮನ್ ದಿಮುಥ್ ಕರುಣರತ್ನೆ ಆಸ್ಟ್ರೇಲಿಯಾ ಬೌಲರ್ ಬೌನ್ಸರ್ ಗೆ ಗಾಯಗೊಂಡು ಆಸ್ಪತ್ರೆ ಪಾಲಾಗಿ ಇನ್ನೂ 24 ಗಂಟೆಗಳೂ ಕಳೆದಿಲ್ಲ.
24 ಗಂಟೆಗಳಲ್ಲಿ 2 ನೇ ಪ್ರಕರಣ: ಆಸೀಸ್ ವೇಗಿಯ ಬೌನ್ಸರ್ ಗೆ ಲಂಕಾದ ಮತ್ತೋರ್ವ ಬ್ಯಾಟ್ಸ್ ಮನ್ ಆಸ್ಪತ್ರೆ ಪಾಲು!
24 ಗಂಟೆಗಳಲ್ಲಿ 2 ನೇ ಪ್ರಕರಣ: ಆಸೀಸ್ ವೇಗಿಯ ಬೌನ್ಸರ್ ಗೆ ಲಂಕಾದ ಮತ್ತೋರ್ವ ಬ್ಯಾಟ್ಸ್ ಮನ್ ಆಸ್ಪತ್ರೆ ಪಾಲು!
Updated on
ಕ್ಯಾನ್ಬೆರಾ: ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ ಮನ್ ದಿಮುಥ್ ಕರುಣರತ್ನೆ ಆಸ್ಟ್ರೇಲಿಯಾ ಬೌಲರ್ ಬೌನ್ಸರ್ ಗೆ ಗಾಯಗೊಂಡು ಆಸ್ಪತ್ರೆ ಪಾಲಾಗಿ ಇನ್ನೂ 24 ಗಂಟೆಗಳೂ ಕಳೆದಿಲ್ಲ. ಆಗಲೇ ಲಂಕಾದ ಮತ್ತೋರ್ವ ಬ್ಯಾಟ್ಸ್ ಮನ್ ಆಸೀಸ್ ವೇಗಿಯ ಬೌನ್ಸರ್ ಗೆ ಇದೇ ಮಾದರಿಯಲ್ಲಿ ಗಾಯಗೊಂಡಿದ್ದಾರೆ. 
ಕುಸಲ್ ಪಿರೇರಾ ಗಾಯಗೊಂಡಿರುವ ಬ್ಯಾಟ್ಸ್ ಮನ್ ಆಗಿದ್ದು,  ಜಾಯ್ ರಿಚರ್ಡ್ಸನ್ ಎಸೆತದಲ್ಲಿ ವೇಗವಾಗಿ ಬಂದ ಚೆಂಡು ಪಿರೇರಾ ಹೆಲ್ಮೆಟ್ ನ್ನು ಛಿದ್ರಗೊಳಿಸಿದ್ದು ಕುತ್ತಿಗೆ ಭಾಗದ ರಕ್ಷಣಾ ಕವಚ ಹಾರಿ ಹೋಗಿದೆ. ತಕ್ಷಣವೇ ಲಂಕಾ ತಂಡದವರು ಪಿರೇರಾಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಇದಾದ ಬಳಿಕ ಕೇವಲ 4 ಎಸೆತಗಳನ್ನು ಎದುರಿಸುತ್ತಿದ್ದಂತೆಯೇ ಪಿರೇರಾ ಗಾಯದಿಂದ ತೀವ್ರವಾಗಿ ನೋವುಂಟಾಗಿ ಮೈದಾನದಿಂದ ಹೊರಬಂದಿದ್ದಾರೆ. 
ಇನ್ನು ನೆನ್ನೆ ಬೌಲರ್ ಬೌನ್ಸರ್ ಗೆ ಕುಸಿದುಬಿದ್ದಿದ್ದ ಕರುಣರತ್ನೆ ಫಿಟ್ ಆಗಿದ್ದು ಪಿರೇರಾ ಬದಲಾಗಿ ಕ್ರೀಸ್ ಗೆ ಇಳಿದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com